top of page
5 row.png

ನಗರದಲ್ಲಿ ಪಕ್ಷಿಗಳು
ಬೆಂಗಳೂರು ಆವೃತ್ತಿ
 

ಯೋಜನೆಯ ಬಗ್ಗೆ

ಬೆಂಗಳೂರು ಮಹಾನಗರವು ತನ್ನ ಪರಿಧಿಯಲ್ಲಿ ನಗರ ಉದ್ಯಾನವನಗಳು, ಸಸ್ಯೋದ್ಯಾನಗಳು ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶಗಳಿಗೆ ಆಸರೆ ನೀಡಿದೆ. ಆದರೆ, ನಗರವು ಈ ಹಲವು ವರ್ಷಗಳಲ್ಲಿ ಅದರ ಭೂ-ವಿನ್ಯಾಸ ಮತ್ತು ಪರಿಸರದಲ್ಲಿ ಕೆಲವು ತೀವ್ರವಾದ ಬದಲಾವಣೆಗಳನ್ನು ಅನುಭವಿಸಿದೆ, ಇದರಿಂದ ನಗರವು ಉತ್ತಮವಾದ ರೀತಿಯಲ್ಲಿ ಬದಲಾವಣೆ ಕಂಡಿದೆ  ಜೊತೆಗೆ ದುಷ್ಟಪರಿಣಾಮಗಳನ್ನೂ ಅನುಭವಿಸಿದೆ, ಇದರಿಂದ  ನಗರವನ್ನೇ ಬೆಂಬಲಿಸಿಕೊಂಡಿರುವ ವನ್ಯಜೀವಿಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಪಕ್ಷಿಗಳು ವನ್ಯಜೀವಿಗಳ ಒಂದು ಅಂಗವಾಗಿದ್ದು, ಇವು ಮಾನವರ ಸಹಚರವಾಗಿದ್ದು, ಅವರೊಟ್ಟಿಗೆ ಜೀವನ ಸಾಗಿಸುತ್ತವೆ.. ಬೆಂಗಳೂರಿನಲ್ಲಿ ಹಕ್ಕಿ-ಪಕ್ಷಿಗಳ ಪ್ರಭೇದ ಹಾಗೂ ಸಂಖ್ಯೆಗಳು, ಸಮಯದ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಬದಲಾವಣೆ ಕಂಡರೂ ಕೂಡ ಬೆಂಗಳೂರು ಈಗಲೂ ಪಕ್ಷಿ ವೀಕ್ಷಣೆಗೆ ಸ್ವರ್ಗ-ತಾಣ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಬೆಂಗಳೂರು ನಗರ ಭಾಗದಲ್ಲಿ ನಗರೀಕರಣ ಹಾಗೂ ಪಕ್ಷಿಗಳ ಜೀವವೈವಿಧ್ಯದ ಮೇಲೆ ಅದರಿಂದ ಆಗುತ್ತಿರುವ ಪರಿಣಾಮಗಳ ನಡುವಿನ ಸಂಬಂಧವನ್ನು ಸೆರೆಹಿಡಿಯಲು ಪ್ರಯತ್ನಿಸುವ ಬೋರ್ಡ್ ಆಟ(ಮಣೆ ಆಟ)ವನ್ನು ನಾವು ವಿನ್ಯಾಸಗೊಳಿಸುತ್ತಿದ್ದೇವೆ.

ನಮ್ಮ ಆಟವು ಉಲ್ಲಾಸದ ಸಂಪನ್ಮೂಲವಾಗಿದ್ದು, ಬೆಂಗಳೂರಿನ ಪ್ರಸ್ತುತ ಪಕ್ಷಿ-ಜೀವನವನ್ನು ಗುರುತಿಸಲು ಮತ್ತು ದಾಖಲೀಕರಣದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಮಾತ್ರವಲ್ಲದೆ

ಬದಲಾಗುತ್ತಿರುವ ನಗರಭಾಗಗಳಿಂದ ಪಕ್ಷಿಗಳ ಜೀವನ-ಇತಿಹಾಸದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಕೂಡ ಸಹಾಯ ಮಾಡುತ್ತದೆ.  ನಮ್ಮ ಪ್ರೇಕ್ಷಕರು ಮುಖ್ಯವಾಗಿ ಯುವ ವಯಸ್ಕರು, ಆದರೆ ಬೆಂಗಳೂರಿನ ಎಲ್ಲಾ ನಿವಾಸಿಗಳಿಗೆ, ವಿವಿಧ ವಯೋಮಾನದವರಿಗೂ ಇದು ತಲುಪುವಂತೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಆಟದಲ್ಲಿ ಆಟಗಾರರ ಅನುಭವದಿಂದ ಪ್ರೇರೇಪಿಸಲ್ಪಟ್ಟ ಸಂವಾದಾತ್ಮಕ ಸ್ವರೂಪವಾದ ಸಂಭಾಷಣೆಗಳನ್ನು ನಡೆಸಲು ಹಾಗೂ ನಿರಂತರವಾಗಿ ಬದಲಾಗುತ್ತಿರುವ ನಗರ ಪರಿಸರವು ಪಕ್ಷಿಗಳಿಗೆ ಸೃಷ್ಟಿಸುವ ಸವಾಲುಗಳ ಬಗ್ಗೆ ತಿಳಿದುಕೊಳ್ಳಲು ನಾವು ಅವಕಾಶವನ್ನು ಕಲ್ಪಿಸುತ್ತೇವೆ. ಆಟವು ಕುತೂಹಲವನ್ನು ಹುಟ್ಟಿಸುತ್ತದೆ ಮತ್ತು ಅದರಿಂದ ಆಟಗಾರರಿಗೆ ಅವರ ನಗರದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಗರ ವನ್ಯಜೀವಿಗಳ ಮೇಲೆ ಅದರಿಂದ ಆಗುತ್ತಿರುವ ಪ್ರಭಾವಗಳ ಬಗ್ಗೆ ಸಂವೇದನಾಶೀಲಗೊಳಿಸುತ್ತದೆ, ಜೊತೆಗೆ ಅವರ ಸುತ್ತಲಿನ ನೈಸರ್ಗಿಕ ಪ್ರಪಂಚದ ಬಗ್ಗೆ ಹೆಚ್ಚು ಅರಿವು, ಸಹಾನುಭೂತಿ ಮತ್ತು ಆಸಕ್ತಿಯನ್ನು ಉಂಟುಮಾಡುತ್ತದೆ ಎಂದು ನಾವು ಭಾವಿಸುತ್ತೇವೆ.

 

ಬೆಂಗಳೂರು ಸಸ್ಟೈನಬಿಲಿಟಿ ಫೋರಂನ ಸಣ್ಣ ಅನುದಾನ ಕಾರ್ಯಕ್ರಮದ ಭಾಗವಾಗಿ ಈ ಯೋಜನೆಗೆ ಹಣ ನೀಡಲಾಗಿದೆ. ನೀವು ಈ ಆಟದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನಮ್ಮ ಬ್ಲಾಗ್‌ಗೆ ಭೇಟಿ ನೀಡಿ, ಅಲ್ಲಿ ನಾವು ನಿರ್ದಿಷ್ಟ ಮೈಲಿಗಲ್ಲುಗಳನ್ನು ಪೂರೈಸಿದಾಗ ನಮ್ಮ ಪ್ರಯಾಣವನ್ನು ಹಂಚಿಕೊಳ್ಳುತ್ತೇವೆ. 

ತಂಡ

ಆಟದ ಪರಿಕಲ್ಪನೆ ಮತ್ತು ವಿನ್ಯಾಸ - ಪ್ರೀತಿ ಬಂಗಲ್ ಮತ್ತು ಪ್ರಸಾದ್ ಸಂದ್ಭೋರ್

ದೃಶ್ಯ ವಿನ್ಯಾಸ ಮತ್ತು ವಿವರಣೆಗಳು - ನಿಕೋಲ್ ಎಲ್ಸಾ

ನಗರದ ಘಟನೆಗಳು ಮತ್ತು ಪಕ್ಷಿ ಪ್ರೊಫೈಲ್ ಸಂಶೋಧನೆ ಮತ್ತು ಬ್ಲಾಗ್ ಬರವಣಿಗೆ - ಅನುಷ್ಕಾ ದಾಸ್ಗುಪ್ತ

ವೆಬ್‌ಸೈಟ್ ಮತ್ತು ಅನುಭವ ವಿನ್ಯಾಸ - ಶಶಾಂಕ್ ಜೋಹ್ರಿ

ಕಂಪ್ಯಾನಿಯನ್ ಬುಕ್ಲೆಟ್ - ಟಿಯಾರಾ ಅರೋರಾ

ಕನ್ನಡ ಅನುವಾದಗಳು - ಅದಿತಿ ರಾವ್

ಕನ್ನಡ ವಿಷಯ ವಿಮರ್ಶೆ - ಸವಿತಾ ಕುಮಾರ್

ಪ್ಲೇಟೆಸ್ಟರ್ಸ್

ಅಮೋದ್ ಸುರೇಶ್, ಆರೋಹ ಮಾಳಗಿ, ಅದಿತಿ ರಾವ್, ಅಕುಲ್ ಸತೀಶ್, ಅನಿಕೇತ್ ಜೋಶಿ, ಅಂಜಲಿ ರಮೇಶ್, ಅನುಷ್ಕಾ ವಾಘ್, ಅರ್ಶ್ಮೀನ್ ಬವೇಜಾ, ಅಶ್ವಿನ್ ವಿಶ್ವನಾಥನ್, ಭಾನು ಶ್ರೀಧರನ್, ಕಾರ್ಲೋಸ್ ಗೊನ್ಜಾಲೆಜ್-ಡಯಾಜ್, ಚೈತನ್ಯ ಅತ್ರೆ, ಚೈತನ್ಯ ಜೋಶಿ, ಚಾರ್ಲಿನ್ ಫೋಚ್, ಡೇಯ್ ಕ್ರಿಸ್ಟಿನಾ ಚಕ್ರವರ್ತಿ, ಫ್ರಾನ್ಸೆಸ್ಕಾ ಫೊಫಾನೊ, ಗಣೇಶ್ ಸಾವಂತ್, ಗಿರೀಶ್ ಕೃಷ್ಣನ್, ಇಪ್ಸಿತಾ ಹೆರ್ಲೆಕರ್, ಈಶ್ವರ್ ಶರ್ಮಾ, ಜೋ ಕಿಡ್, ಜಾನ್ ಟೆರೆಂಜಿನಿ, ಜುಯಿ ಬೋರ್ಗಾಂವ್ಕರ್, ಕಾಂಚನ್ ವೈದ್ಯ, ಲಿಂಡಾ ಡನ್‌ಲಾಪ್, ಮೈತ್ರೇಯಿ ಮುಜುಂದಾರ್, ಮಾಲಾ ಪಟೇಲ್, ಮಾನಸಿ ಪಿಂಗಲ್, ಮಂದರ್ ಮಹಾಬಲ್, ಮಾನಿಯಾ ಡಿಸಿಲ್ವಾ ವ್ಯಾನ್, ಮಿತಾಲಿ ಶೆವಾಡೆ, ಮಿತ್ತಲ್ ಗಾಲಾ, ಮೌನ ನಾಗರಾಜು, ಮುಕ್ತಾ ವಾಟ್ವೆ, ಮುಕುಂದ್ ಕೃಷ್ಣ ಕುಮಾರ್, ನಮ್ರತಾ ನರೇಂದ್ರ, ನಿಕೋಲ್ ಎಲ್ಸಾ, ನಿಶಿಗಂಧ ಮಹಾಜನ್, ನಿವೇದಿತಾ ಬಿರ್ದವಾಡೆ, ಪ್ರಣವ್ ಮಾಯೆಕರ್, ಪ್ರಣವ್ ಸತೀಶ್, ಪ್ರಾಂಜಲ್ ವಾಘ್, ಪ್ರಿಯಾ ಬಂಗಲ್, ರಮೇಶ್ ಸಂದ್ಭೋರ್, ರಿಪೇ ದೇ ವ್ಹಾನಸೆಟ್, ರಪೇ ದೇಶ್ಪಾನ್ಸೆಟ್ , ಸಚಿನ್ ಮೋಹಿತೆ, ಸಹನಾ ಅರುಣ್‌ಕುಮಾರ್, ಸಲೋನಿ ಗಾಯಕ್‌ವಾಡ್, ಸಯೀ ಗಿರ್ಧಾರಿ, ಶಶಾಂಕ್ ಜೋಹ್ರಿ, ಶುಭಂಕರ್ ಕಾಮತ್, ಸ್ಮೃತಿ ಸಫಾಯ, ಸ್ನೇಹಲ್ ಮಹಾಬಲ್, ಸುಭದ್ರಾ ದೇವಿ, ಸುಪ್ರಿಯಾ ರಾಣಿ, ಸುರೇಖಾ ಸಂದ್‌ಭೋರ್, ತನಯಾ ಆಪ್ಟೆ, ತನ್ವಿ ದೇಶಪಾಂಡೆ, ಝುಡ್‌ ವರದ್‌ಪಾಂಡೆ, ತಿಯಾರಾ ಔರಾದ್‌ಪೋರಾನಾ ಹಮ್ಜಾಕಿ

IN THE NEWS

ನಮ್ಮನ್ನು ಸಂಪರ್ಕಿಸಿ

ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ನಮ್ಮೊಂದಿಗೆ ಸಹಕರಿಸಲು ಬಯಸಿದರೆ ಅಥವಾ ಆಟ ಪರೀಕ್ಷೆ (ಪ್ಲೇ ಟೆಸ್ಟ್ ನ)ಯ ಭಾಗವಾಗಲು ಬಯಸಿದರೆ, ಈ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ:

ಸಂಪರ್ಕಕ್ಕೆ ಕಾರಣ:

ನಮ್ಮ ಜೊತೆಯಲ್ಲಿ ಸಂಪರ್ಕ ಹೊಂದಿದ್ದಕ್ಕಾಗಿ ಧನ್ಯವಾದಗಳು. ನಾವು ಶೀಘ್ರದಲ್ಲೇ ನಿಮ್ಮನ್ನು ಪುನಃ ಸಂಪರ್ಕಿಸುತ್ತೇವೆ.

ನಮ್ಮನ್ನು ಸಂಪರ್ಕಿಸಿ

ಇಮೇಲ್

©2022 by Play In Nature. Proudly created with Wix.com

bottom of page